ಜಾನಪದ ಗೀತೆಗಳು

ಮೂಡಲ್ ಕುಣಿಗಲ್ ಕೆರೆ

ಜಾನಪದ

ರಚನೆ

ಜಾನಪದ

ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈಭೋಗ

ಮೂಡಿ ಬರ್ತಾನೆ ಚಂದಿರಾಮ |

ತಂತ್ರಿಗೆ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ ಹಾದಿಲ್ ಕಲ್ಲು ಕಟ್ಟೆ ||

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ

ಭಾವಾ ತಂದಾನು ಬಣ್ಣದ ಸೀರೆ | ತಾನಂದಾನೊ

ಭಾವಾ ತಂದಾನು ಬಣ್ಣದ ಸೀರೆ ||

ಆಹಾ ನಿಂಬೆಯ ಹಣ್ಣಿನಂಅತೆ ತುಂಬಿದ್ ಕುಣಿಗಲ್ ಕೆರೆ

ಅಂದಾ ನೊಡಾಲು ಶಿವ ಬಂದ | ತಾನಂದಾನೋ

ಅಂದಾ ನೊಡಾಲು ಶಿವ ಬಂದ ||

ಅಂದಾನೆ ನೋಡಲು ಶಿವ ಬಂದು ಶಿವಯೋಗಿ

ಕಪ್ ಹಕ್ಕಿ ಬಾಯ ಬಿಡುತಾವೆ | ತಾನಂದಾನೋ

ಕಪ್ ಹಕ್ಕಿ ಬಾಯ ಬಿಡುತಾವೆ ಬಿಡದಿ

ಗಪ್ಪಾಗೊಂಬಾಳೆ ನಡುಗ್ಯಾವೆ ||

ಹಾರಕ್ಕೊಂದೂರುಗೋಲು ನೂಕಾಕ್ಕೊಂದುರುಗೋಲು

ಬೊಬ್ಬೆ ಹೊಡೆದಾವೆ ಬಾಳೆಮೀನು | ತಾನಂದಾನೊ

ಬೊಬ್ಬೆ ಹೊಡೆದಾವೆ ಬಾಳೆಮೀನು ಕೆರೆಯಾಗೆ

ದೊಪ್ಪಿಸಾರಂಗ ನಗುತಾವೆ ತಾನಂದಾನೊ

ದೊಪ್ಪಿಸಾರಂಗ ನಗುತಾವೆ ||

ಹಂಚಿಕೊಳ್ಳಿ: